Tuesday, November 15, 2011

ನಿನ್ನದೇ ನೆನಪು ...!!!




ಕನಸಿಗೂ ಒಂದು ಹೆಸರಿದೆ,
ಮಿಡಿತಕ್ಕೂ ಭಾವ ನೂರಿದೆ,
ಕನವರಿಕೆಯ ಸೇತುವೆಯ ಮುರಿದೊಗೆದೆ,ನೋಡಲು ನೀನಿರೆ
ಕಟ್ಟಿದ ಪದಗಳ ತೀರಕೆ,
ಇಂದಿಗೂ ನಿನ್ನಯ ಹೆಸರಿದೆ..

ಮನಸ್ಸಲ್ಲಿ ದಿನವೂ ಪ್ರಶ್ನೆಯೇ,
ನಿನ್ನ ತುಸು ಹಸಿ ನೆನಪು...
ಮನದ ಎದೆಯಾಳದ ಕರೆಯು
ಜಾಹಿರಾತು ನೀಡದೆ..??
ಬಂದು ನೋಡೆ ಮೆಲ್ಲಗೆ,
ಹೃದಯದಿ ನಿನ್ನ ನೆನಪಿದೆ,ನಿನ್ನದೇ ನೆನಪಿದೆ...!!!!
                                      
                                          - " ಮನಸ್ಸು"